December 19, 2025

ಮಂಗಳೂರು:ಮಳಲಿ ತಾಂಬೂಲ ಪ್ರಶ್ನೆ: ಜ್ಯೋತಿಷಿಗಳಿಗೆ ಇತಿಹಾಸದ ಬಗ್ಗೆ ನರೇಂದ್ರ ನಾಯಕ್ ಸವಾಲು-ಭವಿಷ್ಯ ನುಡಿಯಲು ಜ್ಯೋತಿಷಿಗಳು ವಿಫಲ!

0
image_editor_output_image357208416-1654092709412.jpg

ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ವಿಚಾರವಾದಿ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ಸವಾಲೆಸೆದು ಗೆದ್ದಿದ್ದಾರೆ.

ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ಇತಿಹಾಸದ ಕುರಿತಂತೆ ಭವಿಷ್ಯ ನುಡಿಯಲು ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ನೀಡಲು ವಿಫಲರಾಗಿದ್ದಾರೆ. ಈ ಕುರಿತಂತೆ ವಿಚಾರವಾದಿ ನರೇಂದ್ರ ನಾಯಕ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೀಡಿದ ಸಾವಾಲೇ?

ವಿಚಾರವಾದಿ ನರೇಂದ್ರ ನಾಯಕ್ ಅವರು ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸ್ಆ್ಯಪ್ ನಂಬರ್ ಹಾಗೂ ಇಮೈಲ್ ಗೆ ಕಳುಹಿಸಬಹುದು ಎಂದಿದ್ದರು. ಈ ಸವಾಲನ್ನು ನಾಲ್ವರು ಸ್ವೀಕರಿಸಿ ಉತ್ತರಿಸುವ ಪ್ರಯತ್ನ ನಡೆಸಿದ್ದರು.

ಇನ್ನು ಹಿಂದೆ ತಿಳಿಸಿದಂತೆ ನರೇಂದ್ರ ನಾಯಕ್ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಗಳನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೇ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೇ ಕವರ್ ನಲ್ಲಿ 10 ದಿರ್ಹಮ್, 4ನೇ ಕವರ್ ನಲ್ಲಿ ನೇಪಾಳದ 20ರೂ., 5ನೇ ಕವರ್ ನಲ್ಲಿ ಸಿಂಗಾಪುರದ 10 ಡಾಲರ್, 6ನೇ ಕವರ್ ನಲ್ಲಿ Astrology Flopped miserably Once again ಎಂದು ಬರೆಯಲಾಗಿತ್ತು. 7ನೇ ಕವರ್ ನಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.

ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ. ಆ ಮೂಲಕ ಪ್ರಯತ್ನಿಸಿದ ಎಲ್ಲರ ಉತ್ತರಗಳು ತಪ್ಪಾಗಿರುವುದು ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ. ಇನ್ನು ಕವರ್ ನಲ್ಲಿ ಈ ವಸ್ತುಗಳನ್ನು ಇರಿಸಿದ ಬಳಿಕ ಕವರ್ ನ ಮೇಲೆ ಸಹಿ ಮಾಡಲಾಗಿತ್ತು. ಕೆಲವು ಪತ್ರಕರ್ತರೂ ಕೂಡ ಕವರ್ ಗಳ ಮೇಲೆ ಸಹಿ ಮಾಡಿದ್ದರು ಎಂದು ನರೇಂದ್ರ ನಾಯಕ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!