ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ನಾಡಗೀತೆಗೆ ಅವಮಾನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು
ಬೆಂಗಳೂರು: ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ಇವರಿಬ್ಬರ ವಿರುದ್ಧ ವಕೀಲರುಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರಿಗೆ ಇಂದು ದೂರನ್ನು ಸಲ್ಲಿಸಲಾಗಿದೆ.
ರೋಹಿತ್ ಚಕ್ರತೀರ್ಥ ಕುವೆಂಪುರವರು ರಚಿಸಿರುವ ‘ಜಯ ಭಾರತ ಜನನಿಯ ತನುಜಾತೆ’ ಹಂಚಿಕೊಳ್ಳಲಾಗಿತ್ತು, ಇದು ಈಗಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಾಡಿನ ಜನತೆಯ ಸಹನೆ, ಸೌಹಾರ್ದತೆಯನ್ನು ಕೆಡಿಸುವಂತಹ ಉದ್ದೇಶದಿಂದಲೇ ಬರೆಯಲಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ. ರಂಗನಾಥ್, ಹರಿರಾಮ್, ಸೂರ್ಯ ಮುಕುಂದರಾಜ್, ಸೇರಿದಂತೆ ಜಗದೀಶ್ ಕುಮಾರ್ ರವರು ದೂರನ್ನು ಸಲ್ಲಿಸಿದ್ದಾರೆ.





