ವಿಟ್ಲ: ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿ 104 ಅಂಕಗಳೊಂದಿಗೆ ಉತ್ತೀರ್ಣ:
ಮರು ಮೌಲ್ಯಮಾಪನದ ಬಳಿಕ ಹೊರೈಝನ್ ಪಬ್ಲಿಕ್ ಸ್ಕೂಲ್‌ಗೆ 100% ಪಲಿತಾಂಶ
ವಿಟ್ಲ: ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ವಿಟ್ಲದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಕನ್ನಡ ವಿಷಯದಲ್ಲಿ 17 ಅಂಕಗಳನ್ನು ಪಡೆದು ಅನುತ್ತೀರ್ಣಗೊಂಡಿದ್ದು, ಇದೀಗ ಮರುಮೌಲ್ಯ ಮಾಪನದಲ್ಲಿ 104 ಅಂಕ ಪಡೆದು ಉತ್ತೀರ್ಣಗೊಂಡಿದ್ದಾಳೆ.
ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿನಿ ನಾಜಿಯಾ ಪರೀಕ್ಷೆಯಲ್ಲಿ ಕನ್ನಡದಲ್ಲಿ 17 ಅಂಕಗಳನ್ನು ಪಡೆದು, ಅನುತ್ತೀರ್ಣಗೊಂಡಿದ್ದು, ಇದರಿಂದ ಶಾಲೆ ಶೇ. 98 ಫಲಿತಾಂಶ ದಾಖಲಿಸಿತ್ತು. ಬಳಿಕ ಮರು ಮೌಲ್ಯಮಾಪನಕ್ಕಾಗಿ ಸಲ್ಲಿಸಿದ್ದ ಉತ್ತರ ಪತ್ರಿಕೆಯನ್ನು ಪರಿಶೀಲಿಸಿದಾಗ 104 ಅಂಕಗಳೊಂದಿಗೆ ನಾಜಿಯಾ ತೇರ್ಗಡೆಯಾಗಿದ್ದಾಳೆ. ಈಕೆ ಒಟ್ಟು 483 ಅಂಕಗಳನ್ನು ಪಡೆದಿರುತ್ತಾಳೆ.
ಇದರೊಂದಿಗೆ ಹೊರೈಝನ್ ಪಬ್ಲಿಕ್ ಸ್ಕೂಲ್ ಸತತ ಎರಡನೆ ವರ್ಷ 100% ಫಲಿತಾಂಶದ ಸಾಧನೆ ಮಾಡಿದೆ. 2022 ನೇ ಸಾಲಿನಲ್ಲಿ ಪರೀಕ್ಷೆ ಬರೆದ ಎಲ್ಲಾ 37 ವಿದ್ಯಾರ್ಥಿಗಳು ಕೂಡಾ ಉತ್ತೀರ್ಣರಾಗಿದ್ದಾರೆ.




