March 27, 2026

ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ ಶಾಸಕ ಎಂ. ಪಿ ರೇಣುಕಾಚಾರ್ಯ: ಕೇಸ್ ದಾಖಲು

0
n3886879541653228173324087d7786ed0fbcb442fefa9cd55a5c6b8378ff0dd3f6038b18f357b48c02dad5.jpg

ದಾವಣಗೆರೆ: ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ್ದ ಮಾಜಿ ಸಚಿವ, ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಬೈರನಹಳ್ಳಿ ಗ್ರಾಮದಲ್ಲಿ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದರು. ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ತಾವೇ ಚಲಾಯಿಸಿ ಗಮನ ಸೆಳೆದಿದ್ದರು.

ಗ್ರಾಮಕ್ಕೆ ಬಸ್ ಓಡಿಸಿಕೊಂಡು ಬಂದ ಶಾಸಕರನ್ನು ಕಂಡು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಶಾಸಕರು ಬಸ್ ಓಡಿಸಿ ಗಮನ ಸೆಳೆದಿದ್ದರು. ಲೈಸನ್ಸ್ ಇಲ್ಲದೇ ಶಾಸಕ ರೆಣುಕಾಚಾರ್ಯ ಬಸ್ ಓಡಿಸಿದ್ದಕ್ಕಾಗಿ ಇದೀಗ ಶಾಸಕರ ವಿರುದ್ಧ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!