ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ಗೆ ಶೇ. 98% ಫಲಿತಾಂಶ
ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ SSLC ಪರೀಕ್ಷೆಯಲ್ಲಿ 98% ಫಲಿತಾಂಶ ಪಡೆದಿರುತ್ತದೆ.



ಪರೀಕ್ಷೆ ಬರೆದ 37 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು 500 ಕ್ಕಿಂತಲೂ ಹೆಚ್ಚು ಅಂಕ ಪಡೆದಿರುತ್ತಾರೆ. ಅವುಗಳಲ್ಲಿ 4 ಡಿಸ್ಟಿಂಕ್ಷನ್ ಒಳಗೊಂಡಿದೆ. ಉಳಿದ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಒಂದು ಪ್ರತಿಭಾವಂತ ವಿದ್ಯಾರ್ಥಿನಿಯು ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದು, ಶಿಕ್ಷಕರಾದ ನಮ್ಮನ್ನು ದಿಗ್ಬ್ರಮೆಗೊಳಿಸಿದೆ. ಸದ್ರಿ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಹಾಕಿದ್ದು, ಶೇ100 ಫಲಿತಾಂಶ ಬರುವ ಭರವಸೆಯಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ.




