ವಿಟ್ಲ: ಸಿ ಆರ್ ಪಿ ಎಪ್ ಯೋಧ ದಯಾನಂದ ನೆತ್ರಕೆರೆಗೆ ಮಾಜಿ ಸಚಿವ ಬಿ. ರಮಾನಾಥ ಅವರಿಂದ ಸನ್ಮಾನ

ವಿಟ್ಲ: ಸಿ ಆರ್ ಪಿ ಎಪ್ ನಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಯೋಧ ದಯಾನಂದ ನೆತ್ರಕೆರೆ ಅವರನ್ನು ಮಾಜಿ ಸಚಿವ ಬಿ. ರಮಾನಾಥ ರೈ ಸನ್ಮಾನಿಸಿದರು.
ದಯಾನಂದ ಅವರು 2001-2021ರವರವರೆಗೆ ಕಾಶ್ಮೀರ, ಅಸ್ಸಾಂ, ನಾಗಲ್ಯಾಂಡ್, ದೆಹಲಿ, ಉತ್ತರ ಪ್ರದೇಶ ಹೀಗೆ 20 ವರ್ಷಗಳ ಕಾಲ ಜೀವದ ಹಂಗು ತೊರೆದು ತಾಯ್ನಾಡಿನ ರಕ್ಷಣೆಗಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಹುಟ್ಟುರಿಗೆ ಆಗಮಿಸಿದ್ದರು. ವೀರ ಯೋಧ ದಯಾನಂದ ನೆತ್ರೆಕೆರೆ ವಿಟ್ಲ ಇವರ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಶಾಲು ಹೊದಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ವಿಟ್ಲಪಡ್ನೂರು ವಲಯ ಅಧ್ಯಕ್ಷ ಬಿ ಸಂದೇಶ್ ಶೆಟ್ಟಿ, ಲಯನ್ಸ್ ಪ್ರಾಂತೀಯ ಸಲಹೆಗಾರರಾದ ಸುದರ್ಶನ್ ಪಡಿಯಾರ್, ಸಿದ್ದಿಕ್ ಸರಾವು, ಸಿರಾಜ್ ಮಾದಕ,ಎಂಎಸ್ ಮಹಮ್ಮದ್, ಜಾಫರ್ ಖಾನ್, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರುಗಳು, ಹಾಗೂ ಸೈಂಟ್ ರೀಟ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.