May 14, 2026

ಮಾದಕ ಹ್ಯಾಶ್ ಆಯಿಲ್ ಮಾರಾಟ: ಕಾಸರಗೋಡು ಮೂಲದ ವ್ಯಕ್ತಿಯ ಬಂಧನ

0
Screenshot_20220513-181710_Chrome.jpg

ಬೆಂಗಳೂರು: ಹ್ಯಾಶ್ ಆಯಿಲ್ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಆರೋಪಿಯನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ‌. ಕಾಸರಗೋಡು ಮೂಲದ ರಾಹುಲ್ (25) ಎಂಬಾತ ಬಂಧಿತ ಆರೋಪಿ.

ಮೇ 10ರಂದು ಆಡುಗೋಡಿ ಠಾಣಾ ವ್ಯಾಪ್ತಿಯ ಮಹಾಲಿಂಗೇಶ್ವರ ಬಂಡೆ ಬಳಿ ಆರೋಪಿಯು ಗಿರಾಕಿಗಳಿಗೆ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಆಡುಗೋಡಿ ಠಾಣಾ ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಮಾಲು ಸಮೇತ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಹ್ಯಾಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!