May 14, 2026

ಮಂಜೇಶ್ವರ: ಮನೆಯ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳವು

0
istockphoto-623985786-612x612.jpg

ಕಾಸರಗೋಡು: ಮಂಜೇಶ್ವರ ಕುಂಜತ್ತೂರಿನಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 20 ಪವನ್ ಚಿನ್ನಾಭರಣ ಹಾಗೂ ಒಂದು ಸಾವಿರ ನಗದು ಕಳವುಗೈದ ಘಟನೆ ನಡೆದಿದೆ.

ಯತೀಮ್ ಖಾನ್ ರಸ್ತೆಯ ದಿವಂಗತ ಅಬ್ಬಾಸ್ ರವರ ಬಾಡಿಗೆ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಪತ್ನಿ ಮತ್ತು ಮಕ್ಕಳು ಗುರುವಾರ ರಾತ್ರಿ ಮನೆಗೆ ಬೀಗ ಹಾಕಿ ಸಂಬಂಧಿಕರ ವಿವಾಹಕ್ಕೆ ತೆರಳಿದ್ದರು ತಡರಾತ್ರಿ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಮನೆಯ ಮೊದಲ ಅಂತಸ್ತಿನ ಬಾಗಿಲು ಮುರಿದು ಕಳ್ಳರು ಒಳನಿಗ್ಗಿದ್ದು, ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ. ಕಳ್ಳರು ಮನೆಯೊಳಗಡೆ ಮೆಣಸಿನ ಹುಡಿ ಎರಚಿದ್ದು, ಮೆಣಸಿನ ಹುಡಿಯ ಒಂದು ಕವರ್ ಮನೆ ಪರಿಸರದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!