May 14, 2026

ಮಂಗಳೂರು: ಚರಂಡಿಗೆ ಉರುಳಿ ಬಿದ್ದ ನೀರುಳ್ಳಿ ತುಂಬಿದ್ದ ಲಾರಿ: ಇಬ್ಬರಿಗೆ ಗಾಯ

0
Screenshot_20220513-181256_Chrome.jpg

ತೊಕ್ಕೊಟ್ಟು: ಚಾಲಕನ ನಿಯಂತ್ರಣ ತಪ್ಪಿದ ನೀರುಳ್ಳಿ ಲೋಡ್ ಇದ್ದ ಲಾರಿ ರಸ್ತೆಬದಿಯ ಚರಂಡಿಗೆ ಉರುಳಿಬಿದ್ದ ಘಟನೆ ರಾ.ಹೆ 66ರ ತೊಕ್ಕೊಟ್ಟು ಕಾಪಿಕಾಡು ಬಳಿ ಸಂಭವಿಸಿದೆ.

ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಾಯಗೊಂಡಿದ್ದು, ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರ ಕಡೆಯಿಂದ ಕೇರಳ ಕಡೆಗೆ ಈರುಳ್ಳಿ ಸಾಗಾಟ ನಡೆಸುವಾಗ ಘಟನೆ ನಡೆದಿದೆ.

ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ನಾಗುರಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!