July 4, 2026

ಕಾಸರಗೋಡು ಮೂಲದ ನಟಿಯ ಮೃತದೇಹ ಬಾಡಿಗೆ ಮನೆಯಲ್ಲಿ ಪತ್ತೆ: ಪತಿ ಪೊಲೀಸ್ ವಶಕ್ಕೆ

0
image_editor_output_image1429420803-1652433436063

ಕೇರಳ: ಕಾಸರಗೋಡು ಭಾಗದ ನಟಿಯೊಬ್ಬರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಪತ್ತೆಯಾಗಿದೆ.

ಸಹನಾ (20) ಅವರ ಮೃತದೇಹ ಪತ್ತೆಯಾಗಿದೆ. ಈಕೆ ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿಯಾಗಿದ್ದು, ಕಳೆದ ರಾತ್ರಿ ಕೊಯಿಕ್ಕೋಡಿನ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಸಹನಾ ಒಂದೂವರೆ ವರ್ಷಗಳ ಹಿಂದೆ ಸಜಾದ್ ರನ್ನು ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೊಮ್ಮೆ ಕೊಲೆ ಮಾಡುವುದಾಗಿ ಸಜಾದ್ ಬೆದರಿಕೆ ಹಾಕಿದ್ದ. ಆಕೆಯ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಗಂಡ ಸಜಾದ್ ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You may have missed

error: Content is protected !!