July 3, 2026

ಎಸ್‌ಬಿಐ ಬ್ಯಾಂಕ್ ನಲ್ಲಿ ದರೋಡೆ ನಡೆಸಲು ವಿಫಲ ಯತ್ನ

0
image_editor_output_image1785866025-1652343610015.jpg

ಯಲ್ಲಾಪುರ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಯಲ್ಲಿ ದರೋಡೆ ನಡೆಸಲು ಪ್ರಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಕಿಟಕಿ ಮೂಲಕ ಒಳಗೆ ಪ್ರವೇಶಿಸಿದ ಕಳ್ಳರು ಕಳುವಿಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ‘ಗೋಡೆ ಪಕ್ಕದಲ್ಲಿರುವ ಸಜ್ಜಾ ಮೇಲೆ ನಡೆದುಕೊಂಡು ಹೋಗಿ, ಹಿಂಬದಿಯ ಕಿಟಕಿಯ ಗ್ರಿಲ್ಸ್ ತೆಗೆದು ಒಳ ಪ್ರವೇಶಿಸಿದ್ದಾರೆ. ಆದರೆ ನೆಲಮಹಡಿಯಲ್ಲಿದ್ದ ಸ್ಟ್ರಾಂಗ್ ರೂಮ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಗುರುತು ಸಿಗಬಾರದು ಎಂದು ಸಿಸಿ ಕ್ಯಾಮರಾವನ್ನು ತಿರುಗಿಸಿ ಇಟ್ಟಿದ್ದಾರೆ‌’ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್ಐ ಅಮಿನ್ ಅತ್ತಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!