February 1, 2026

ಪತಿಗೆ ಅಕ್ರಮ ಸಂಬಂಧ: ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪತ್ನಿ

0
image_editor_output_image1226906615-1652343413731.jpg

ಕೇರಳ: ಪೊಲೀಸ್ ಆಗಿದ್ದ ಪತಿಯು ಬೇರೊಂದು ಮಹಿಳೆ ಜೊತೆ ಸಂಬಂಧ ಹೊಂದಿರುವುದರಿಂದ ಬೇಸತ್ತು ಪತ್ನಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಪತ್ನಿ ನಜ್ಲಾ (27) ಹಾಗೂ ಮಕ್ಕಳಾದ ಟಿಪ್ಪು ಸುಲ್ತಾನ್ (5) ಮತ್ತು ಮಲಾಲ (1) ಸಾವನ್ನಪ್ಪಿದವರು. ಮೂವರು ಆಲಪ್ಪುಳದ ಎ.ಆರ್. ಕ್ಯಾಂಪ್ ಬಳಿಯಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ನಜ್ಲಾ ಸಹೋದರಿ ನಫ್ಲಾ ಹೇಳಿಕೆ ಮೇರೆಗೆ ಪೊಲೀಸ್ ಅಧಿಕಾರಿ ರೆನೀಜ್ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ನಫ್ಲಾ ಹೇಳಿಕೆಯ ಪ್ರಕಾರ ಅಂಬಾಲಪುಳ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿಯಾಗಿದ್ದ ರೆನೀಜ್‌ಗೆ ಬೇರೊಂದು ಮಹಿಳೆ ಜತೆ ಸಂಬಂಧವಿದ್ದು, ಇದನ್ನು ಪತ್ನಿ ನಜ್ಲಾ ಪ್ರಶ್ನಿಸಿದ್ದಕ್ಕೆ ಆಕೆಗೆ ಈತ ಕಿರುಕುಳ ನೀಡುತ್ತಿದ್ದ. ಬೇರೆ ಮಹಿಳೆಯಿಂದ ರೆನೀಜ್‌ಗೆ ಬರುತ್ತಿದ್ದ ಮೆಸೇಜ್‌ಗಳ ಬಗ್ಗೆಯೂ ಪತ್ನಿ ತಗಾದೆ ತೆಗೆಯುತ್ತಿದ್ದಳು.

ಇದಕ್ಕಾಗಿ ಆಗಾಗ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದ ಆಕೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಹೋದರಿ ಮತ್ತು ಆಕೆಯ ಇಬ್ಬರು ಮಕ್ಕಳ ಸಾವಿಗೆ ರೆನೀಜ್ ಕಾರಣ ಎಂದು ತಿಳಿಸಿದ್ದಾರೆ. ಫೋನ್ ಕರೆಯ ಬಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿದ್ದ ಬಗ್ಗೆ ನೆರೆಹೊರೆಯವರು ಸಹ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಆರೋಪಿ ರೆನೀಜ್ ಕರ್ತವ್ಯದಿಂದ ಮನೆಗೆ ವಾಪಸ್ಸಾದ ವೇಳೆ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅಲ್ಲದೆ, ಇಬ್ಬರು ಮಕ್ಕಳು ನೆಲದ ಮೇಲೆ ಬಿದ್ದಿದ್ದರು. ಮಗನನ್ನು ಕತ್ತು ಹಿಸುಕಿ ಕೊಂದಿದ್ದು, ಮಗಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!