ಪ್ರೀತಿಯ ವಿಚಾರ: ಯುವಕನ ಕೊಲೆ, ಮಾಜಿ ಪ್ರಿಯಕರ ಸೇರಿ ಮೂವರ ಬಂಧನ
ಬೆಂಗಳೂರು: ಮಾಜಿ ಪ್ರೇಯಸಿಯ ಹಾಲಿ ಪ್ರೇಮಿ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದ ಯುವತಿಯ ಮಾಜಿ ಪ್ರಿಯಕರ ಸೇರಿ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಮರ್ಥ್ ನಾಯರ್ ಎಂಬಾತನೇ ಕೊಲೆಯಾದ ಯುವಕ. ಶಿವಮೊಗ್ಗ ಮೂಲದ ಸಮರ್ಥ್ ನಾಯರ್‌ನ ಮೇಲೆ ಭೀಕರವಾಗಿ ಹಲ್ಲೆ ನಡೆದಿದ್ದು, ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲೇ ಸಮರ್ಥ್ ಸಾವನ್ನಪ್ಪಿದ್ದಾನೆ.
ಕಿರಣ್ ಎಂಬಾತನೇ ಸಮರ್ಥ್‌ನ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದ ಆರೋಪಿ. ಸಮರ್ಥ್ ಭದ್ರಾವತಿ ಮೂಲದ ಯುವತಿ ಒಬ್ಬಳನ್ನು ಪ್ರೀತಿಸುತ್ತಾ ಇದ್ದ. ಸುರಕ್ಷಾಗೆ ಗಾರ್ಮೆಂಟ್ಸ್‌ವೊಂದರಲ್ಲಿ ಕ್ವಾಲಿಟಿ ಚೆಕರ್ ಆಗಿದ್ದ ಸಮರ್ಥ ನಾಯರ್ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.
ಇಬ್ಬರು ಹೊಂಗಸಂದ್ರದ ಮನೆಯೊಂದರಲ್ಲಿ ಜತೆಯಲ್ಲೇ ವಾಸವಾಗಿದ್ದರು. ಆದರೆ ಆಕೆ ಇದಕ್ಕೂ ಮುನ್ನ ಕಿರಣ್ ಎಂಬಾತನನ್ನು ಪ್ರೀತಿಸುತ್ತಾ ಇದ್ದಳು. ಕಿರಣ್ ಹಾಗೂ ಆ ಯುವತಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.




