March 23, 2026

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಧೂಲಿಯಾ ಮತ್ತು‌ ಪಾರ್ದೀವಾಲಾ ಪ್ರಮಾಣ ವಚನ ಸ್ವೀಕಾರ

0
n384765838165211007518426154536ddb682852a302852c2e0e0c5875af40f3b21684e7959e00d1b8174bd.jpg

ನವದೆಹಲಿ: ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧೂಲಿಯಾ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಜಮ್‌ಶೆದ್‌ ಬಿ. ಪಾರ್ದೀವಾಲಾ ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಈಗ 34ಕ್ಕೆ ಏರಿಕೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿಯಾಗಿವೆ.

2022 ಜನವರಿ 4ರಂದು ನ್ಯಾ. ಆರ್. ಸುಭಾಷ್ ರೆಡ್ಡಿ ಅವರ ನಿವೃತ್ತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಇಳಿದಿದ್ದು, ಇಂದು ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು, ನ್ಯಾಯಮೂರ್ತಿಗಳಾದ ಧೂಲಿಯಾ ಹಾಗೂ ಪಾರ್ದೀವಾಲಾ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!