March 23, 2026

ಅತ್ಯಾಚಾರ ಪ್ರಕರಣ: ಮಲಯಾಳಂನ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಬಂಧನ ವಾರಂಟ್ ಜಾರಿ

0
vijay-babu-ians-1104817-1651164412.jpg

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಖ್ಯಾತ ನಟ ವಿಜಯ್ ಬಾಬು ಅವರಿಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲೈಂಗಿಕ ಕ್ರಿಯೆ ನಡೆಸಿ ವಂಚಿಸಿದ್ದಾರೆಂದು ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ದೂರು ನೀಡಿದ್ದಾಗಿನಿಂದಲೂ ನಟ ವಿಜಯ್ ತಲೆ ಮರೆಸಿಕೊಂಡಿದ್ದು ಆತನನ್ನು ಬಂಧಿಸುವಂತೆ ಎನಾರ್ಕುಲಂನ ಕೋರ್ಟ್ ರೆಕಾರ್ಡ್ ಕಾರ್ನರ್ ನೋಟಿಸ್ ಅನ್ನು ಹೊರಡಿಸಿತ್ತು.

ಇನ್ನು ಕೋರ್ಟ್ ನೋಟಿಸ್ ನೀಡಿದ ನಂತರ ಪೊಲೀಸರು ನಟ ಮತ್ತು ನಿರ್ಮಾಪಕ ವಿಜಯ್‍ಬಾಬುವಿನ ಫೋಟೋ ಹಾಗೂ ವಿವರಗಳನ್ನು ಅಂತರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯ ವೆಬ್‍ಸೈಟ್‍ನಲ್ಲೂ ಹಾಕಿದ್ದು, ಈಗ ಕೇರಳ ಪೊಲೀಸರು ಕೂಡ ಆತನ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!