March 22, 2026

ಕಲಬುರಗಿ: ಹಾಡಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ

0
n384421288165201778501964376a16f683f779fbbcdaf641c82e138b31ecd00b13fd76ec09d969f3a399bb.jpg

ಕಲಬುರಗಿ: ನಗರದ ಶಹಾಬಜಾರ್ ನಾಕಾ ಬಳಿಯ ಲಾಲ್ ಹನುಮಾನ್ ನಗರದಲ್ಲಿ ಅಪರಾಹ್ನ ರೌಡಿಶೀಟರ್ ರಾಘು (28) ನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗುಂಪೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹಲವಾರು ಸುಲಿಗೆ ಕೊಲೆ ಪ್ರಯತ್ನದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ರಾಘುನನ್ನು ವಿರೋಧಿ ಗುಂಪು ಅಟ್ಟಾಡಿಸಿಕೊಂಡು ಲಾಂಗು ಮಚ್ಚು ಹಾಗೂ ಕತ್ತಿಗಳಿಂದ ಕೊಚ್ಚಿ ಕೊಲೆ ಮಾಡಿದೆ. ಈ ಕುರಿತು ಸ್ಥಳೀಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!