March 22, 2026

19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾದ ಬಗ್ಗೆ ಪುರಾವೆಗಳನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ ಕಾಂಗ್ರೆಸ್

0
Screenshot_20220508-175551_Chrome.jpg

ಬೆಂಗಳೂರು: 19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾಂಗ್ರೆಸ್ ಸಲ್ಲಿಸಿದೆ.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ. ಪಾಟೀಲ್, ಇಂದು ನಮ್ಮ ಸಭಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. 19 ಲಕ್ಷ ಇವಿಎಂ ಯಂತ್ರಗಳು ನಾಪತ್ತೆಯಾಗಿರುವ ಬಗ್ಗೆ ಪುರಾವೆಗಳು ಮತ್ತು ಕಾಗದ ಪತ್ರಗಳನ್ನು ನೀಡಿರುವುದಾಗಿ ತಿಳಿಸಿದರು.

19 ಲಕ್ಷ ಇವಿಎಂ ಯಂತ್ರಗಳು ಕಾಣೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಪೂರಕವಾಗಿ 2,750 ಪುಟಗಳ ಕಾಗದ ಪತ್ರಗಳನ್ನು ಸಲ್ಲಿಸಲಾಗಿದೆ. ಮನೊರಂಜನ್ ಸಂತೋಷ್ ರಾಯ್ ಪಿಎಲ್ ಮಾಡಿದ್ರು. ಅದರ ಮಾಹಿತಿಗಳನ್ನು ಸ್ಪೀಕರಿಗೆ ಅವರಿಗೆ ಸಲ್ಲಿಕೆ ಮಾಡಿದ್ದೇನೆ ಎಂದರು.

ಇನ್ನು ಪಿಎಸ್ ಐ ಹಗರಣ, 40 % ಹಗರಣ, ಸಂತೋಷ್ ಪಾಟೀಲ್ ಆತ್ಮಹತ್ಯೆ, ದಿಂಗಾಲೇಶ್ವರ ಶ್ರೀಗಳ ಆರೋಪದ ನಂತರವೂ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂದು ಖಾರವಾಗಿ ನುಡಿದರು.

Leave a Reply

Your email address will not be published. Required fields are marked *

error: Content is protected !!