ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಖಲಿಸ್ತಾನದ ದ್ವಜ ಮತ್ತು ಬರಹ: ತನಿಖೆಗೆ ಆದೇಶ
ಧರ್ಮಶಾಲಾ: ಡೆಹ್ರಾಡೂನ್‌ನಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಭಾನುವಾರ ಖಾಲಿಸ್ತಾನದ ಧ್ಜಜ ಅಂಟಿಸಲಾಗಿದೆ.
ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಡರಾತ್ರಿ ಅಥವಾ ಮುಂಜಾನೆ ಈ ಕೃತ್ಯ ನಡೆದಿರುವ ಸಾಧ್ಯತೆಗಳಿವೆ. ಖಾಲಿಸ್ತಾನ ಧ್ವಜಗಳನ್ನು ತೆಗೆದಿದ್ದೇವೆ. ಪಂಜಾಬ್‌ನಿಂದ ಬಂದಿರಬಹುದಾದ ಪ್ರವಾಸಿಗರು ಈ ಕೆಲಸ ಮಾಡಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಹೇಳಿದ್ದಾರೆ.
‘ಖಾಲಿಸ್ತಾನ್ ಧ್ವಜವನ್ನು ಹಾರಿಸಿದ ಹೇಡಿತನದ ಘಟನೆಯನ್ನು ನಾನು ಖಂಡಿಸುತ್ತೇನೆ’ ಎಂದು ಸಿಎಂ ಠಾಕೂರ್ ಟ್ವೀಟ್ ಮಾಡಿದ್ದಾರೆ.




