May 14, 2026

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ವೀಡಿಯೊ ವೈರಲ್ ಬಳಿಕ ಪ್ರಕರಣ ದಾಖಲು

0
Screenshot_2022-05-07-14-44-51-18_680d03679600f7af0b4c700c6b270fe7.jpg

ಪಾಟ್ನಾ: ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿರುವ ವಿಡಿಯೋ ವೈರಲ್ ಆದ ಬಳಿಕ 50 ವರ್ಷದ ಕಾಮುಕ ತಂದೆಯನ್ನು ಬಂಧಿಸಿರುವ ಘಟನೆ ಬಿಹಾರದ ಸಮಸ್ಠಿಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಆರೋಪಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಈತ ಸಮಸ್ಠಿಪುರ್ ನ ರೋಸೆರಾ ನಿವಾಸಿಯಾಗಿದ್ದಾನೆ. ತನ್ನ 18 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ, ಕೊಲ್ಲುವ ಬೆದರಿಕೆ ಒಡ್ಡಿದ್ದ. ಕಾಮುಕ ತಂದೆಯ ಮುಖವಾಡ ಬಯಲು ಮಾಡಲು ಸಂತ್ರಸ್ತೆ ಹಿಡನ್ ಕ್ಯಾಮರಾ ಉಪಯೋಗಿಸಿ ವಿಡಿಯೋವನ್ನು ಸೆರೆ ಹಿಡಿದಿರುವುದಾಗಿ ವರದಿ ವಿವರಿಸಿದೆ.

ಕಾಮುಕ ತಂದೆ ಅತ್ಯಾಚಾರ ಎಸಗುತ್ತಿರುವ ವಿಡಿಯೋ ರೆಕಾರ್ಡ್ ಮಾಡಿದ್ದ ಮಗಳು, ನ್ಯಾಯ ಕೊಡಿಸಿ ಎಂದು ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಇಂಡಿಯಾ ಟುಡೇ ವರದಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!