August 20, 2026

ಮಂಗಳೂರು: ದುಬೈನಿಂದ‌ ಬಂದ ವ್ಯಕ್ತಿಯ ಗುದದ್ವಾರದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಪತ್ತೆ

0
image_editor_output_image-653592481-1651914562536.jpg

ಮಂಗಳೂರು: ದುಬೈನಿಂದ‌ ಬಂದ ವ್ಯಕ್ತಿ ಲಕ್ಷಾಂತರ ಮೌಲ್ಯದ ಚಿನ್ನವನ್ನು ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡು ಬಂದು ಸಿಕ್ಕಿಬಿದ್ದ ಘಟ‌ನೆ ಮಂಗಳೂರು ವಿಮಾನನಿಲ್ದಾಣದಲ್ಲಿ ನಡೆದಿದೆ‌.

ದುಬೈನಿಂದ ಬಂದ ಪ್ರಯಾಣಿಕನೋರ್ವನನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಆತನ ಬಳಿ 24 ಕ್ಯಾರೆಟ್ 732 ಗ್ರಾಂ ಚಿನ್ನ ಪತ್ತೆಯಾಗಿದೆ.

ಇದರ ಮೌಲ್ಯ 37,69,800 ರೂ. ಎಂದು ಅಂದಾಜಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದುಬೈನಿಂದಲೇ ಬಂದ ಮತ್ತೋರ್ವ ಪ್ರಯಾಣಿಕ ಪ್ರತಿಷ್ಠಿತ ಸಂಸ್ಥೆಯ ಬ್ರಾಂಡ್​ನ ಡೈರಿ ಕ್ರೀಂ ಟಿನ್​ನೊಳಗಡೆ 24 ಕ್ಯಾರೆಟ್​ನ 116.540 ಗ್ರಾಂ ಚಿನ್ನ ಸಾಗಾಟ‌‌‌‌ ಮಾಡಿ‌ ಸಿಕ್ಕಿಬಿದ್ದಿದ್ದಾನೆ.

Leave a Reply

Your email address will not be published. Required fields are marked *

error: Content is protected !!