May 14, 2026

ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ: ಇಬ್ಬರು ಡಿಎಸ್ಪಿ, ಇನ್ ಸ್ಪೆಕ್ಟರ್ ಸೇರಿ 12 ಪೊಲಿಸ್ ಸಿಬ್ಬಂದಿ ಅಮಾನತು

0
Screenshot_2022-05-07-14-32-13-10_680d03679600f7af0b4c700c6b270fe7.jpg

ಕಲಬುರಗಿ: 545 ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ನ ಅಕ್ರಮ ತಡೆಯಲು ವಿಫಲರಾದ ಆರೋಪದ ಮೇರೆಗೆ ಇಬ್ಬರು ಡಿಎಸ್ಪಿ, ಇನ್ಸ್ ಪೆ ಕ್ಟರ್ ಹಾಗೂ ಇಬ್ಬರು ಪಿಎಸ್ಐ ಸೇರಿ 12 ಪೊಲಿಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಡಿ ಎಸ್ಪಿ ಮಲ್ಲಿಕಾರ್ಜುನ ಸಾಲಿ, ಇನ್ಸ್ ಪೆಕ್ಟರ್ ಮೇತ್ರೆ ಅವರನ್ನು ಅಮಾನತು ಗೊಳಿಸಲಾಗಿದೆ.

ಅದೇ ರೀತಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಂಎಸ್ಐ ಕಾಲೇಜ ನ ಪರೀಕ್ಷಾ ಕೇಂದ್ರದಲ್ಲಿ ಕಳೆದ ಆಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಹೊರಗೆ ಬರುವುದನ್ನು ತಡೆಯಲು ಹಾಗೂ ಒಎಂಆರ್ ಶೀಟ್ ತಿದ್ದುಪಡಿ ಜತೆಗೇ ಪರೀಕ್ಷೆ ಮುಗಿದ ನಂತರವೂ ಉತ್ತರ ಬರೆದಿರುವುದು ಸೇರಿದಂತೆ ಇತರ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದನ್ನು ಪರಿಗಣಿಸಿ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!