ಮಂತ್ರವಾದಿಯಿಂದ ಮಹಿಳೆಯ ಮಗುವಿನ ಎದುರಲ್ಲೇ 79 ದಿನಗಳ ಕಾಲ ಅತ್ಯಾಚಾರ
ಬಾಲಾಸೋರ್: ಮಹಿಳೆ ಮೇಲೆ ಮಂತ್ರವಾದಿಯೊಬ್ಬ ಆಕೆಯ ಎರಡು ವರ್ಷದ ಮಗುವಿನ ಎದುರಲ್ಲೇ 79 ದಿನಗಳ ಕಾಲ ಅತ್ಯಾಚಾರ ಎಸಗಿರುವ ಪ್ರಕರಣ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗನನ್ನು ಮಂತ್ರವಾದಿಯ ಕೊಠಡಿಯಿಂದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮಂತ್ರವಾದಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಹಿಳೆ ಮತ್ತು ಗಂಡನ ಮನೆಯವರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಆಕೆಯ ಪತಿ ಮತ್ತು ಅತ್ತೆ, ಮಂತ್ರವಾದಿಯೊಂದಿಗೆ ಇರುವಂತೆ ಒತ್ತಾಯಿಸಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
2017ರಲ್ಲಿ ವಿವಾಹವಾಗಿದ್ದ ಮಹಿಳೆ ತನ್ನ ಗಂಡನ ಮನೆಯವರು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕೆಲ ತಿಂಗಳ ಕಾಲ ಮಹಿಳೆ ತನ್ನ ಜೊತೆಗಿದ್ದರೆ ಕುಟುಂಬದ ಮನಸ್ತಾಪ ಬಗೆಹರಿಸುವುದಾಗಿ ಮಾಂತ್ರಿಕ ಹೇಳಿದ್ದ ಎಂದು ತಿಳಿದುಬಂದಿದೆ.
ಇದಕ್ಕೆ ವಿರೋಧಿಸಿದಾಗ ನನಗೆ ಮತ್ತು ಬರುವ ಔಷಧ ನೀಡಲಾಗಿತ್ತು. ನಂತರ, ಎಚ್ಚರವಾದಾಗ ನಾನು ಮಾಂತ್ರಿಕನ ಕೊಠಡಿಯಲ್ಲಿದ್ದೆ, ನನ್ನ ಮಗನೂ ಅಲ್ಲಿಯೇ ಇದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಮೇಲೆ ಮಂತ್ರಿವಾದಿ 79 ದಿನಗಳ ಕಾಲ ಮಗನ ಮುಂದೆಯೇ ಅತ್ಯಾಚಾರ ಎಸಗಿದ್ದಾನೆ.




