May 14, 2026

ಪಡೀಲ್ ಬಜಾಲ್ ಕ್ರಾಸ್ ಬಳಿಯ ಹತ್ಯೆಗೆ ಹೊಂಚು: ಇಬ್ಬರು ಯುವಕರ ಬಂಧನ

0
Screenshot_2022-05-07-11-03-45-50_6012fa4d4ddec268fc5c7112cbb265e7.jpg

ಮಂಗಳೂರು: ನಗರದ ಪಡೀಲ್ ಬಜಾಲ್ ಕ್ರಾಸ್ ಬಳಿಯ ಅಯ್ಯಂಗಾರ್ ಬೇಕರಿಯ ಕಟ್ಟಡದ ಹಿಂದೆ ದುಷ್ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ಇಬ್ಬರು ಯುವಕರನ್ನು ಸಂಶಯದ ಮೇಲೆ ಕಂಕನಾಡಿ ನಗರ ಠಾಣೆಯ ಪೊಲೀಸರು ನಿನ್ನೆ ಮುಂಜಾನೆ ಬಂಧಿಸಿದ್ದಾರೆ.

ನಿನ್ನೆ ಮುಂಜಾನೆ ಸುಮಾರು 4.30ಕ್ಕೆ ಎಎಸ್ಸೈ ಜಗದೀಶ್ ಗಸ್ತು ನಿರತರಾಗಿದ್ದ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಸಂಶಯಾಸ್ಪದ ರೀತಿಯಲ್ಲಿರುವುದು ಕಂಡು ಬಂತು.

ತಕ್ಷಣ ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ.

ಮೂಡುಬಿದಿರೆಯ ಹೊಸಬೆಟ್ಟು ಗ್ರಾಮದ ಮೊಗರುಗುಡ್ಡೆಯ ಪ್ರಸಾದ್ ಪೂಜಾರಿ (25) ಮತ್ತು ಬೆಂಗಳೂರು ಜೆಪಿ ನಗರದ ಮಹೇಂದ್ರ (26) ಎಂದು ಈ ಯುವಕರು ಪೊಲೀಸರಿಗೆ ಗುರುತು ಪರಿಚಯ ನೀಡಿದ್ದು, ಬಳಿಕ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!