March 20, 2026

ರಾಮನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್, ಇನೋವಾ ಕಾರ್ ನಡುವೆ ಅಪಘಾತ: ಉಡುಪಿ ಜಿಲ್ಲೆಯ ಮೂವರು ಸ್ಥಳದಲ್ಲೇ ಮೃತ್ಯು

0
image_editor_output_image2105742076-1651901351789.jpg

ರಾಮನಗರ: ಕನಕಪುರ ತಾಲ್ಲೂಕಿನ ಕೆಮ್ಮಾಳೆದೊಡ್ಡಿ ಬಳಿ ಶನಿವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಕ್ಷತಾ, ಅವರ ಆರು ತಿಂಗಳ‌ ಮಗು ಸುಮಂತ್ ಹಾಗೂ ಕಾರ್ ಚಾಲಕ ಉಮೇಶ್ ಸಾವನ್ನಪ್ಪಿದವರು. ಅಪಘಾತದ ತೀವ್ರತೆಗೆ ಮಗುವಿನ ದೇಹ ಛಿದ್ರವಾಗಿದೆ. ಮತ್ತಿಬ್ಬರಿಗೆ ಗಾಯಗಳಾಗಿದ್ದು, ಕನಕಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!