March 19, 2026

ಐಪಿಎಲ್ ಪಂದ್ಯಾಟದ ವೇಳೆ ಜಿತೇಶ್ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್: ವೀಡಿಯೋ ವೈರಲ್

0
image_editor_output_image-1845263479-1651666980532

ಮುಂಬೈ: ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಮುಗ್ಗರಿಸಿದ್ದು, ಈ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪತನವಾಗಿದ್ದು, ಹಾರ್ದಿಕ್ ಪಾಂಡ್ಯ ಕೊಟ್ಟ ಕ್ಯಾಚ್ ಜಿತೇಶ್ ಶರ್ಮಾ ಕೈ ಸೇರಿದಾಗ ರಿಷಿ ಧವನ್ ಶರ್ಮಾಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪಾಂಡ್ಯಗೆ ಬೀಳ್ಕೊಡುಗೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 8 ವಿಕೆಟ್ ಕಳೆದುಕೊಂಡು ಕೇವಲ 143ರನ್ ಮಾಡಿತು. ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್ 50 ಎಸೆತಗಳಲ್ಲಿ ಅಜೇಯ 65 ರನ್ ಕಲೆಹಾಕಿದ್ದು ತಂಡದ ಪರ ಗರಿಷ್ಠ ಸ್ಕೋರ್ ಆಗಿತ್ತು.

pic.twitter.com/OYEEacKAmK
— Addicric (@addicric) May 3, 2022

ಇನ್ನು ಜಿತೇಶ್ ಹಿಡಿದ ಸರಳ ಕ್ಯಾಚ್‌ಗೆ 7 ಎಸೆತಗಳಲ್ಲಿ ಒಂದು ರನ್‌ ಕಲೆಹಾಕಿದ್ದ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದು, ಹಾರ್ದಿಕ್ ವಿಕೆಟ್ ಪಡೆಯುತ್ತಿದ್ದಂತೆ ರಿಷಿ ಧವನ್ ಆತನಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪಾಂಡ್ಯಗೆ ಬೀಳ್ಕೊಡುಗೆ ನೀಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!