March 20, 2026

ಮೈಸೂರು: ಕರ್ತವ್ಯನಿರತ ಎಪಿಎಂಸಿ ಏಜೆಂಟ್ ನ ಬರ್ಬರ ಹತ್ಯೆ

0
n38301597616516266880867be4a33bfcf4471b113d0e28ec06db81c39506bc3e487092cb23fe6ee383e87b.jpg

ಮೈಸೂರು: ಎಪಿಎಂಸಿ‌ ಆವರಣದಲ್ಲಿರುವ ತಮ್ಮ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಎಪಿಎಂಸಿ ಏಜೆಂಟ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿ ಎಂ.ಜೆ.ರವಿ(35) ಎಂಬವರು ಕೊಲೆಯಾದವರು.

ಇವರು ಎಪಿಎಂಸಿಯಲ್ಲಿ ಏಜೆಂಟ್ ಆಗಿದ್ದು, ಉತ್ತನಹಳ್ಳಿಯ ಬಳಿಯ ಹೆಳವರಹುಂಡಿಯಲ್ಲಿ ಕುಟುಂಬದ ಸಮೇತ ವಾಸವಿದ್ದರು. ಮೃತರಿಗೆ ತಂದೆ- ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ.

ಎಪಿಎಂಸಿ ಮಳಿಗೆಯಲ್ಲಿ ಮಂಗಳವಾರ ಸಂಜೆ ಕೆಲಸ ಮಾಡುತ್ತಿದ್ದಾಗ, 3-4 ಮಂದಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಆರ್. ಶಿವಕುಮಾರ್, ಮೈಸೂರು ದಕ್ಷಿಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹತ್ಯೆಗೆ ವ್ಯವಹಾರಿಕ ದ್ವೇಷವೇ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!