July 5, 2026

ಕೇರಳದಲ್ಲಿ ಮತ್ತೊಂದು ವಿಷಾಹಾರ ಸೇವನೆ ಪ್ರಕರಣ: 18 ಮಂದಿ ಅಸ್ವಸ್ಥ

0
claim-holiday-food-poisoning-mob.jpg

ವಯನಾಡ್‌: ಶವರ್ಮಾ ಸೇವಿಸಿ ಯುವತಿಯೊಬ್ಬಳು ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಶಂಕಿತ ವಿಷಾಹಾರ ಸೇವನೆ ಪ್ರಕರಣ ವರದಿಯಾಗಿದ್ದು, ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ 18 ಮಂದಿ ಪ್ರವಾಸಿಗರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ.

23 ಮಂದಿ ಪ್ರವಾಸಿಗರು ತಿರುವನಂತಪುರದಿಂದ ವಯನಾಡ್‌ಗೆ ಬಂದಿದ್ದರು. ಇವರೆಲ್ಲ ಸೋಮವಾರ ರಾತ್ರಿ ವಯನಾಡ್‌ನ ವಿವಿಧೆಡೆಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ್ದರು ಎಂದು ವಯನಾಡ್‌ನ ಕಂಬಲಕ್ಕಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಪೆಟ್ಟಾದಲ್ಲಿ ಸೋಮವಾರ ರಾತ್ರಿ ಆಹಾರ ಸೇವಿಸಿದ್ದ ಪ್ರವಾಸಿಗರು ಅಸ್ವಸ್ಥರಾಗಿದ್ದಾರೆ. ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಮೂರು ರೆಸ್ಟೋರೆಂಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಅವರು ಹೇಳಿದ್ದಾರೆ. ಸದ್ಯ 18 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕಾಸರಗೋಡಿನಲ್ಲಿ ಶಂಕಿತ ವಿಷಾಹಾರ ಸೇವನೆಯಿಂದ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿದ್ದರು. ಇದಾದ ಬಳಿಕ ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿಯೂ ಶಂಕಿತ ವಿಷಾಹಾರ ಪ್ರಕರಣಗಳು ವರದಿಯಾಗಿದ್ದವು.

Leave a Reply

Your email address will not be published. Required fields are marked *

You may have missed

error: Content is protected !!