ಅತ್ಯಂತ ವೇಗದ ಬೌಲಿಂಗ್ ಮಾಡಿ ಮತ್ತೆ ಹೊಸ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವೇಗದ ಬೌಲರ್ ಉಮ್ರಾನ್ ಮಲ್ಲಿಕ್ ಪ್ರಸಕ್ತ ಸೀಸನ್‌ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಭಾರತದ ಅತ್ಯಂತ ವೇಗದ ಬೌಲರ್ ಆಗಿರುವ ಉಮ್ರಾನ್ ಮಲ್ಲಿಕ್, ಗುಜರಾತ್ ಟೈಟನ್ಸ್‌ನ ಬೌಲರ್ ಲ್ಯುಕಿ ಫರ್ಗುಸನ್ ಹೆಸರಲ್ಲಿದ್ದ ದಾಖಲೆಯನ್ನ ಮುರಿಯುವ ಮೂಲಕ ಸ್ಪೀಡ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಪಂದ್ಯದ 10ನೇ ಓವರ್‌ನ ಎರಡನೇ ಎಸೆತದಲ್ಲಿ ಉಮ್ರಾನ್ ಮಲ್ಲಿಕ್ ಎಸೆತವನ್ನ ರುತುರಾಜ್ ಗಾಯಕ್ವಾಡ್ ಬೌಂಡರಿಗಟ್ಟಿದರು. ಇದು ಅವರ ಎರಡನೇ ಓವರ್‌ನ ಎರಡನೇ ಎಸೆತವಾಗಿದ್ದು, ಐಪಿಎಲ್‌ನಲ್ಲಿ ಅತ್ಯಂತ ಬೌಲ್ ಮಾಡಿದ ಸಾಧನೆ ಮಾಡಿದ್ದಾರೆ. 154kmph ವೇಗದಲ್ಲಿ ಬೌಲ್ ಮಾಡಿದ ಉಮ್ರಾನ್ ತನ್ನದೇ ಹೆಸರಲ್ಲಿದ್ದ ದಾಖಲೆಯನ್ನ ಮುರಿದಿದ್ದಾರೆ




