March 23, 2026

ಧರ್ಮನಿಂದನೆ ಆರೋಪ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹಿತ ಹಲವರ ಮೇಲೆ ಎಫ್ಐಆರ್ ದಾಖಲು

0
PAKISTAN-POLITICS-3_1649563176004_1651339916370.jpeg

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹಿತ ಹಲವರ ಮೇಲೆ ಧರ್ಮನಿಂದನೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಇಮ್ರಾನ್ ಸಹಿತ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್, ಮಾಜಿ ಮಾಹಿತಿ ಸಚಿವ ಫವಾದ್ ಚೌಧರಿ, ಮಾಜಿ ಪ್ರಧಾನಿಯ ಮಾಜಿ ಸಹಾಯಕ ಶಹಬಾಜ್ ಗಿಲ್, ಆಪ್ತ ಸ್ನೇಹಿತ ಅನೀಲ್ ಮುಸರತ್, ಬ್ಯಾರಿಸ್ಟರ್ ಅಮೀರ್ ಇಲ್ಯಾಸ್ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ಇತರ ಸದಸ್ಯರ ವಿರುದ್ಧ ಪಂಜಾಬ್‌ನ ಫೈಸಲಾಬಾದ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಸೀದಿ-ಎ-ನಬಿವಿಯ ಮದೀನಾದಲ್ಲಿರುವ ಪವಿತ್ರ ಮಸೀದಿಯೊಳಗೆ ಇರುವಾಗ ಪಿಟಿಐ ಸದಸ್ಯರನ್ನು ಸೌದಿ ಅರೇಬಿಯಾಕ್ಕೆ ಯೋಜಿಸಿ ಕಳುಹಿಸುವುದು, ಅಲ್ಲಿ ನಿಂದನೆ ಮಾಡಿ ಘೋಷಣೆ ಕೂಗುವುದು, ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ, ಧರ್ಮನಿಂದನೆ ಸೇರಿದಂತೆ ವಿವಿಧ ಆರೋಪಗಳನ್ನು ಮಾಡಿ ದೂರು ನೀಡಲಾಗಿದ್ದು, ಎಫ್‌ಐಆರ್‌ನಲ್ಲಿ ಇವೆಲ್ಲವುಗಳನ್ನು ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!