March 19, 2026

ಕಾಣಿಯೂರು: ರೈಲ್ವೆ ಟ್ರ್ಯಾಕ್ ನಲ್ಲಿ
ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ: ನಿನ್ನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ

0
IMG-20220429-WA0002.jpg

ಕಡಬ: ವ್ಯಕ್ತಿಯೋರ್ವರ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಕಾಣಿಯೂರು ರೈಲ್ವೇ ಟ್ರ್ಯಾಕ್‌ ನಲ್ಲಿ ಬೆಳಿಗ್ಗೆ ಪತ್ತೆಯಾಗಿದೆ.

ಮೃತರನ್ನು ಕಾಣಿಯೂರು ಸಮೀಪದ ಅಭೀರ ನಿವಾಸಿ ದಿ.ರಾಮಯ್ಯ ಪೂಜಾರಿ ರವರ ಪುತ್ರ ದಿವಾಕರ ಪೂಜಾರಿ(40) ಎನ್ನಲಾಗಿದೆ.

ಕೃಷಿ ಚಟುವಟಿಕೆ ತೊಡಗಿಸಿಕೊಂಡಿದ್ದ ದಿವಾಕರ ರವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ನಿನ್ನೆ ಸಂಜೆಯಿಂದ ಅವರು ಮನೆಯಿಂದ ನಾಪತ್ತೆಯಾಗಿದ್ದು , ಮನೆಯವರು ಹಾಗೂ ಕುಟುಂಬ ಸದಸ್ಯರು ರಾತ್ರಿಯಿಂದಲೇ ಅವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಅವರ ಮೃತದೇಹ ರೈಲ್ವೆ ಟ್ರ್ಯಾಕ್‌ ಬಳಿ ಪತ್ತೆಯಾಗಿದ್ದು, ದಿವಾಕರ ರವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!