ತುರುವೇಕೆರೆ: ಇನೋವಾ ಕಾರಿಗೆ ಲಾರಿ ಢಿಕ್ಕಿ, ಮೂವರು ಮೃತ್ಯು, ಓರ್ವ ಮಹಿಳೆ ಗಂಭೀರ
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಬಳಿ ಇನೋವಾ ಕಾರಿಗೆ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಮೃತರನ್ನು ಮೂಲತಃ ಅರಸೀಕೆರೆ ತಾಲ್ಲೂಕಿನ ಕಮಲಾಪುರದ ಪ್ರಸನ್ನ(28), ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚೆನ್ನಯ್ಯ(32) ಹಾಗೂ ಬೆಂಗಳೂರಿನ ಕೈಗೊಂಡನಹಳ್ಳಿಯ ಸಂತೋಷ್(32) ಎಂದು ಗುರುತಿಸಲಾಗಿದೆ.
ಮೃತ ಪ್ರಸನ್ನನ ಪತ್ನಿ ಮಂದಾರ ಗಂಭೀರ ಗಾಯಗೊಂಡಿದ್ದು ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.




