ದಕ್ಷಿಣ ಕನ್ನಡ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೇಸರಿಕರಣ ಮಾಡಲಾಗಿದೆಯೇ?

ದಕ್ಷಿಣ ಕನ್ನಡ: ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 58 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪಟ್ಟಿಯಲ್ಲಿ ಒಬ್ಬನೇ ಒಬ್ಬ ಬ್ಯಾರಿ ಅಥವಾ ಮುಸ್ಲಿಂ ಸಮಾಜಸೇವ ಸಂಘಟನೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. 25ಕ್ಕೂ ಹೆಚ್ಚು ಪ್ರಶಸ್ತಿಗಳು ಸಮಾಜಸೇವಾ ವಿಭಾಗಕ್ಕೆ ಹೋಗಿವೆ. ದಕ್ಷಿಣ ಕನ್ನಡದ ಬಗ್ಗೆ ಹೇಳುವುದಾದರೆ ಇಲ್ಲಿನ ಮುಸ್ಲಿಂ ಜನಾಂಗ ಸಮಾಜಸೇವೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ನಿರಾಶ್ರಿತರಿಗೆ ಆಶ್ರಯ ಒದಗಿಸುವುದರಿಂದ ಹಿಡಿದು
ಐಸಿಯುನಲ್ಲಿರುವ ರೋಗಿಗಳಿಗೆ ಬ್ಲಡ್’ಡೋನೆಟ್,
ಯಾವುದೇ ದುರ್ಘಟನೆ ಸಂಭವಿಸಿದಾಗ ಪ್ರಾಣ ರಕ್ಷಣೆ,
ಪ್ರಕೃತಿ ವಿಕೋಪ ನಡೆದ ಸಂಧರ್ಭದಲ್ಲಿ ಕಾರ್ಯಾಚರಣೆ,
ತೀವ್ರ ನಿಗಾಘಟಕದಲ್ಲಿರುವ ರೋಗಿಗಳಿಗೆ ಎಲ್ಲ ರೀತಿಯ ಸಹಾಯಹಸ್ತ,
ಅಷ್ಟೆ ಏಕೆ ಕೋವಿಡ್ ಸಂಧರ್ಭದಲ್ಲಿ ತೋರಿಸಿದ ನಿರಂತರ ಸಮಾಜಸೇವೆಯಲ್ಲಿ ಅಗ್ರಸ್ಥಾನದಲ್ಲಿ ಮುಸ್ಲಿಂ ಯುವಕರು ಹಾಗೂ ಇಲ್ಲಿನ ಸಮಾಜಸೇವೆ ಸಂಘಟನೆಗಳು ಮುಂಚೂಣಿಯಲ್ಲಿದೆ.
ಆದರೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ತೀರ್ಪುಗಾರರ ಕುರುಡು ಕಣ್ಣಿಗೆ ಕಾಣದಾಗಿರುವುದು ದುರಂತವೇ ಸರಿ.
ಈ ಎಲ್ಲಾ ಸಮಾಜಸೇವೆಗಳನ್ನು ಇಲ್ಲಿನ ಮುಸ್ಲಿಂ ಸಂಘಟನೆಗಳು ಯಾವುದೇ ಧರ್ಮ ಅಥವಾ ಜಾತಿಗೆ ಸೀಮಿತವಾಗಿ ಮಾಡುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಂಘಟನೆಗಳಿಗೆ ಸೇರಿದ ನೂರಾರು”ಚಾರಿಟಿ” ಟ್ರಸ್ಟ್’ಗಳು ಕಾರ್ಯಾಚರಣೆ ಮಾಡುತ್ತಿವೆ. ಅಷ್ಟೇ ಸಹೃದಯ ಮುಸ್ಲಿಂ ಸಮಾಜಸೇವಕರಿದ್ದಾರೆ.
ಉಚಿತ ಅಂಬುಲೆನ್ಸ್ ಸೇವೆಗಳು,
ನೀರಿನಲ್ಲಿ ಅಪಘಾತಕ್ಕೀಡಾದವರನ್ನು ಮುಳುಗುತಜ್ಞ (ಈಜುಪಟುಗಳು) ಯುವಕರಿಂದ ರಕ್ಷಣೆ
ಕಿಡ್ನಿವೈಫಲ್ಯ ರೋಗಿಗಳಿಗೆ ಉಚಿತ ಡಯಾಲಿಸಿಸ್ ಘಟಕಗಳು,
ಅನಾಥವರಿಗೆ ವೃದ್ಧಾಶ್ರಮ & ಅನಾಥಶ್ರಮಗಳು,
ಕೋವಿಡ್ ಸಂದರ್ಭ ಕಿಟ್, ಮೆಡಿಸಿನ್, ಸೂರು ವಿತರಣೆ, ಮೃತದೇಹದ ಧಫನ ಹಾಗೂ ಕುಟುಂಬಸ್ಥರಿಗೆ ಸಾಂತ್ವನ.
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವು,
ಸಾರ್ವಜನಿಕ ಸ್ಥಳಗಳಲ್ಲಿ ಫಾಗಿಂಗ್, ಸ್ವಚ್ಛತಾ ಕಾರ್ಯಕ್ರಮ ಹಾಗೂ ಹಳೆಯ ಸರ್ಕಾರಿ ಕಟ್ಟಡದ ದುರಸ್ತಿಕರಣದ ಶ್ರಮದಾನ,
ಯಾವುದೇ ಸ್ಥಳಗಳಲ್ಲಿ ಅಪಘಾತಕ್ಕೀಡಾದವರನ್ನು ಮೊದಲು ರಕ್ಷಣೆಗೆ ಧಾವಿಸುವುದು ಇದೇ ದಕ್ಷಿಣ ಕನ್ನಡದ ಬ್ಯಾರಿ ಜನಾಂಗ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಇನ್ನೇನು ಮಾನದಂಡಬೇಕು..?
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 58 ರಲ್ಲಿ ಅರ್ಧದಷ್ಟು ಮಂದಿ ಈ ಜಿಲ್ಲೆಗೆ ಏನು ಕಡಿದು ಗುಡ್ಡೆಹಾಕಿದ್ದಾರೆ..??
ಕೃಪೆ: ಬೆಳಿಯಾಕ (ವಾಟ್ಸ್ ಆ್ಯಪ್)