ಶುಶ್ರೂಷಕಿಯ ಕೈಯಿಂದ ಜಾರಿ ಕೆಳಗೆ ಬಿದ್ದು ನವಜಾತ ಶಿಶು ಮೃತ್ಯು
ನವದೆಹಲಿ : ಹೆರಿಗೆಯ ವೇಳೆ ತಾಯಿಯ ಗರ್ಭದಿಂದ ಹೊರಬಂದಿದ್ದ ಶಿಶುವೊಂದು ಶುಶ್ರೂಷಕಿಯ ಕೈ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಹೆರಿಗೆಯಲ್ಲಿ ಮಗು ಹೊರಬಂದ ಕೂಡಲೇ ಅದನ್ನು ಟವೆಲ್‌ನಲ್ಲಿ ಸುತ್ತಿ ಮೇಲೆತ್ತಬೇಕು. ಆದರೆ, ಹೆರಿಗೆ ಮಾಡಿಸಲು ಸಹಕರಿಸಿದ ಶುಶ್ರೂಷಕಿಯು ಬರಿಗೈಯಲ್ಲೇ ಮಗುವನ್ನು ಮೇಲೆತ್ತಿದ್ದಾರೆ.
ಆಗ, ಮಗು ಕೈಯ್ಯಿಂದ ಜಾರಿ ಹೋಗಿ ಶಸ್ತ್ರಚಿಕಿತ್ಸಾ ಕೊಠಡಿಯ ನೆಲದ ಮೇಲೆ ಬಂದು ಬಿದ್ದಿದೆ ಎಂದು ಹೇಳಲಾಗಿದೆ.





