ಭಾರತೀಯ ವನಿತಾ ಹಾಕಿ ತಂಡದ ಮಾಜಿ ನಾಯಕಿ ನಿಧನ
ಬೆಂಗಳೂರು: ಭಾರತೀಯ ವನಿತಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟೊ (81) ಅವರು ಮಂಗಳವಾರ ನಿಧನ ಹೊಂದಿದರು.
ಖ್ಯಾತ ತ್ರಿವಳಿ ಬ್ರಿಟೊ ಸಹೋದರಿಯರಲ್ಲಿ (ಇನ್ನಿಬ್ಬರು ರಿಟಾ, ಮಾಯಿ) ಹಿರಿಯರಾದ ಎಲ್ವೆರಾ 1960ರಿಂದ 1967ರ ವರೆಗೆ ದೇಶೀಯ ಹಾಕಿ ಕ್ರೀಡೆಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದರು.
ಅವರ ಸಾಧನೆಯಿಂದ ಕರ್ನಾಟಕ ತಂಡವು ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ಜಯಿಸಿತ್ತು. ಅವರು ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.





