July 2, 2026

ಸುಳ್ಯ: ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಚರ್ಚೆ ನಡೆದು ಪರಸ್ಪರ ಗಲಾಟೆ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

0
Screenshot_20220426-211823_WhatsAppBusiness.jpg

ಸುಳ್ಯ: ಹಗ್ಗಜಗ್ಗಾಟ ನಿಯಮಗಳ ಬಗ್ಗೆ ಸ್ಪರ್ಧಾಳುಗಳ ಮಧ್ಯೆ ಚರ್ಚೆ ಏರ್ಪಟ್ಟು ಹಗ್ಗವನ್ನು ಬಿಟ್ಟು ಸ್ಪರ್ಧಾಳುಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.ಅರಂತೋಡು ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಅರಂತೋಡಿನ ಸ. ಹಿ. ಪ್ರಾ. ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆ ಆಯೋಜಿಸಿದ್ದರು.

ಈ ಸಂದರ್ಭ ಸ್ಪರ್ಧೆಯ ಆಟದ ನಿಯಮಗಳ ಬಗ್ಗೆ ಇತ್ತಂಡದಲ್ಲಿ ಚರ್ಚೆ ಶುರುವಾಗಿದೆ. ಬಳಿಕ ಚರ್ಚೆ ವಿಕೋಪಕ್ಕೆ ತಿರುಗಿದೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಪರಸ್ಪರ ಗಲಾಟೆ ಮಾಡಿಕೊಂಡು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!