February 4, 2026

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸ್ಪಾಟ್ ಡೆತ್: ಮೂವರ ಸ್ಥಿತಿ ಗಂಭೀರ

0
image_editor_output_image-535891820-1650878454645.png

ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಸ್ಥಳದಲ್ಲೇ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾಮನಗರದ ಕುಂಭಾಪುರ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಸುಂದ್ರಶ್ (49) ಮತ್ತು ತನ್ಮಯ್ ( 9) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದು ಶೀಲ, ಗಾನವಿ ಮತ್ತು ಸಾನವಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಬ್ಬಕ್ಕೆಂದು ಕುಟುಂಬ ಸಮೇತವಾಗಿ ಒಂದೇ ಕುಟುಂಬದ ಐವರು ಮಂಡ್ಯ ಜಿಲ್ಲೆಯ ಅಗಸನ ಪುರಕ್ಕೆ ಹೋಗಿದ್ದರು. ಹಬ್ಬ ಮುಗಿಸಿ ಬೆಂಗಳೂರಿಗೆ ಹಿಂತಿರುಗುವಾಗ ಓಮಿನಿ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಕಾರಿನ ಮೇಲೆ ಮರ ಬಿದ್ದಿದೆ.

ಈ ಸಂದರ್ಭ ಕಾರು ಸಂಪೂರ್ಣ ಜಖಂಗೊಂಡಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಲ್ಪ ಸಮಯ ಟ್ರಾಫಿಕ್ ಜಾಂ ಆಗಿತ್ತು.

ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!