February 4, 2026

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ಪೇಪರ್ ಲೀಕ್: ಅತಿಥಿ ಉಪನ್ಯಾಸಕಿಯ ಬಂಧನ

0
image_editor_output_image247912609-1650878389145.jpg

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿನ ಪೇಪರ್ ಲೀಕ್ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಸೌಮ್ಯ ಎಂಬವರನ್ನು ಬಂಧಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಪೇಪರ್ ಸೋರಿಕೆ ಸಂಬಂಧ ಮಲ್ಲೇಶ್ವರಂ ಠಾಣೆಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದೂರು ನೀಡಲಾಗಿದ್ದು, ದೂರು ಆಧರಿಸಿ, ತನಿಖೆಗೆ ನಡೆಸಿದ ಪೊಲೀಸರು, ಮೈಸೂರಿನಲ್ಲಿ ಸೌಮ್ಮರನ್ನು ಬಂಧಿಸಿದ್ದಾರೆ.

ಆರೋಪಿ ಸೌಮ್ಯ ಮೈಸೂರು ವಿವಿಯ ಭೂಗೋಶಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರಿನ ಕುವೆಂಪು ನಗರದ ಪಿಯು ಕಾಲೇಜಿನಲ್ಲಿ ಅಸಿಸ್ಟೇಂಟ್ ಪ್ರೊಫೇಸರ್ ಪರೀಕ್ಷೆ ಬರೆಯೋದಕ್ಕೆ ಹಾಜರಾಗಿದ್ದು, ಆಕೆ ಪರೀಕ್ಷೆ ಆರಂಬಕ್ಕೂ ಒಂದು ಗಂಟೆ ಮುಂಚೆ 18 ಪ್ರಶ್ನೋತ್ತರಗಳ ಮಾಹಿತಿಯನ್ನು ವಾಟ್ಸಾಪ್ ನಲ್ಲಿ ತನ್ನ ಗೆಳತಿಗೆ ಕಳುಹಿಸಿದ್ದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!