February 4, 2026

ಮಡಿಕೇರಿಯಲ್ಲಿ ಯುವಕನೋರ್ವ ಗುಂಡೇಟಿಗೆ ಬಲಿ

0
image_editor_output_image644877721-1650729437472.png

ಮಡಿಕೇರಿ; ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದೆ.ಭೇಟೆಗೆಂದು ಗೆಳೆಯರು ಹೋಗಿದ್ದು ಅದರಲ್ಲಿ ಓರ್ವನಿಗೆಯೇ ಗುಂಡಿನ ಏಟು ಬಿದ್ದು ಮೃತಪಟ್ಟಿದ್ದಾರೆ.

ವೀರಾಜಪೇಟೆ ತಾಲೂಕಿನ ಗುಂಡಿಕೆರೆ ನಿವಾಸಿ ಹಮೀದ್ (33) ಗುಂಡೇಟಿಗೆ ಬಲಿಯಾದ ವ್ಯಕ್ತಿ.

ಹಮೀದ್, ಅಶ್ರಫ್ ಹಾಗೂ ರಫೀಕ್ ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರೆನ್ನಲಾಗಿದ್ದು, ಈ ಸಂದರ್ಭ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ.

ಜೊತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಹಮೀದ್ ಕುಟುಂಬಸ್ಥರು ಈ‌ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ಸತ್ಯಾಸತ್ಯತೆ ತನಿಖೆಯಿಂದಲೇ‌ ಹೊರಬರಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!