ರಾಜ್ಯಮಟ್ಟದ ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ- 2021
ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಅರ್ಪಿಸುವ ವಿ.ಟಿವಿ ಸಹಭಾಗಿತ್ವದಲ್ಲಿ 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ- 2021 ಕನ್ನಡದ ಜಾಗೃತಿ ಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ.
ಈ ಸ್ಪರ್ದೆಯಲ್ಲಿ ಎರಡು ವಿಭಾಗಗಳಿದ್ದು, ವಿಭಾಗ ಎ- 12 ವರ್ಷದ ಒಳಗಿನವರಿಗೆ, ವಿಭಾಗ ಬಿ- 12 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆ ನಡೆಯಲಿದೆ. ವಿಡಿಯೋವನ್ನು ಈ ನಂಬರಿಗೆ ವಾಟ್ಸ್ಯಾಪ್ ಮಾಡಿ – 99458 88907.
ಎರಡು ವಿಭಾಗದ ವಿಜೇತರಿಗೆ ಪ್ರಥಮ: ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಪ್ರಶಸ್ತಿ ಹಾಗೂ 10,000 ನಗದು ಬಹುಮಾನ, ದ್ವಿತೀಯ: ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಪ್ರಶಸ್ತಿ ಹಾಗೂ 5,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ನಿಯಮಗಳು:
- ಹಾಡು 3 ನಿಮಿಷದ ಒಳಗಿರಬೇಕು ,
- ಎಡಿಟಿಂಗ್ ಮಾಡಿದ ವೀಡಿಯೋಗಳಿಗೆ ಅನುಮತಿಯಿಲ್ಲ : ಒಬ್ಬರೇ ನಿಂತುಕೊಂಡು ಹಾಡು ಹಾಡಬೇಕು
- ರೆಕಾರ್ಡಿಂಗ್ ಮಾಡುವ ವೀಡಿಯೋ ಲ್ಯಾಂಡ್‌ಸ್ಟೇಪ್ ಅಳತೆಯಲ್ಲಿರಲಿ
- ನವೆಂಬರ್ 2ರ ಒಳಗಾಗಿ ವೀಡಿಯೋ ಕಳುಹಿಸಿಕೊಡಿ
- ಸ್ಮ್ಯೂಲ್, ಸ್ಟಾರ್ ಮೇಕರ್ ಮುಂತಾದ ಆಪ್ ಬಳಸುವಂತಿಲ್ಲ
- ವಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ ಎಲ್ಲಾ ವಿಡಿಯೋಗಳ ಅತೀ ಹೆಚ್ಚು ವೀವ್ ಲೈಕ್ಸ್’ಗಳನ್ನು ಪರಿಗಣಿಸಲಾಗುವುದು.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 84311 14626