March 19, 2026

ವಿಟ್ಲ: ಭಾರೀ ಮಳೆ-ಗಾಳಿ ಮನೆಗಳಿಗೆ ಹಾನಿ: ಮನೆಮಂದಿಯ ಸ್ಥಳಾಂತರ

0
IMG-20220422-WA0002.jpg

ವಿಟ್ಲ: ಬೊಬ್ಬೆಕೇರಿ ಮೀನು ಮಾರುಕಟ್ಟೆ ಸಮೀಪದ ಬೀಪಾತುಮ್ಮ ಅವರ ಮನೆಯ ಸೀಟಿನ ಛಾವಣಿ ಗಾಳಿ ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದೆ.ಮನೆಮಂದಿಯನ್ನು ಸಮೀಪದ ಮನೆಗೆ ಸ್ಥಳಾಂತರ ಮಾಡಲಾಗಿದೆ.

ವಿಟ್ಲ ಸಾಲೆತ್ತೂರು ರಸ್ತೆಯ ನಿವಾಸಿ ಪಾಡುರಂಗ ಆಚಾರ್ಯ ಅವರ ಮನೆಗೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಅದೇ ರೀತಿ ವಿಟ್ಲ ಸುತ್ತಮುತ್ತಲಿನಲ್ಲಿ ಅಪಾರ ಹಾನಿ ಸಂಭವಿಸಿದೆ. ಹೆಚ್ಚಿನ ಹಾನಿಯ ಬಗ್ಗೆ ನಿರೀಕ್ಷಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!