May 17, 2026

ಉಡುಪಿ: ಟ್ಯಾಂಕರ್‌ಗೆ ಸ್ಕೂಟಿ ಡಿಕ್ಕಿ: ಸವಾರ ಮೃತ್ಯು

0
Screenshot_20220421-174348_Chrome.jpg

ಹೆಜಮಾಡಿ: ನಿಂತಿದ್ದ ಬುಲೆಟ್ ಟ್ಯಾಂಕರ್‌ಗೆ ಸ್ಕೂಟಿ ಸವಾರ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಹೆಜಮಾಡಿ ಟೋಲ್ ಗೇಟ್ ಬಳಿಯ ಮಹಾಲಿಂಗೇಶ್ವರ ದೇಗುಲದ ದ್ವಾರದ ಎದುರು ಇಂದು ಮಧ್ಯಾಹ್ನ ಸಂಭವಿಸಿದೆ.

ಮೃತ ಯುವಕನನ್ನು ಮಲ್ಪೆ ಬಳಿಯ ಕೊಡವೂರಿನ ಮಹೇಶ್ ಎಂದು ಗುರುತಿಸಲಾಗಿದ್ದು, ಆತ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಎಂದು ತಿಳಿದು ಬಂದಿದೆ.

ಟೋಲ್ ಗೇಟ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತುರ್ತಾಗಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೂ ಕೂಡ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!