ರೇಖಾ ಕೆ.ಎಸ್ ಗೆ ಮಂಗಳೂರು ವಿ.ವಿ ಡಾಕ್ಟರೇಟ್ ಪದವಿ
ಮಂಗಳೂರು: ಮಂಗಳೂರು ನಗರದ ಸೂಟರ್‌ಪೇಟೆಯ ರೇಖಾ.ಕೆ.ಎಸ್ ಅವರ ‘ರತ್ನಕುಮಾರ್ ಸಾಂಭರಿಯಾ ಕೀ ಕಹಾನಿಯೊ ಮೆ ಅಭಿವ್ಯಕ್ತ್ ದಲಿತ್ ಚೇತನ’ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ.
ವಿವಿಯ ಹಿಂದಿ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಂಯೋಜಕಿ ಡಾ. ಸುಮಾ. ಟಿ. ರೋಡನ್ನವರ್ ಅವರ ಮಾರ್ಗದರ್ಶನದಲ್ಲಿ ಇವರು ಪ್ರಬಂಧ ರಚಿಸಿದ್ದಾರೆ.
ಪ್ರಸ್ತುತ ಇವರು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ, ಕೊಣಾಜೆ ಇಲ್ಲಿ ಹಿಂದಿ ಉಪನ್ಯಾಸಕಿರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮತಿ.ಕೆ ಮತ್ತು ಕೃಷ್ಣ ಸೂಟರ್ ಪೇಟೆ ಅವರ ಪುತ್ರಿ. ಏ. 23 ರಂದು ಮಂಗಲೂರು ವಿವಿಯಲ್ಲಿ ನಡೆಯಲಿರುವ 40ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ನಡೆಯಲಿದೆ.




