March 20, 2026

ಮಂಗಳೂರು: ಸೈಕಲ್ ನಲ್ಲಿ ಆಟ ಆಡುತ್ತಿದ್ದ ಆರು ವರ್ಷದ ಬಾಲಕನ ಮೇಲೆ ಟಿಪ್ಪರ್ ಹರಿದು ಮೃತ್ಯು

0
IMG-20220420-WA0031.jpg

ಮಂಗಳೂರು: ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ 6 ವರ್ಷದ ಬಾಲಕ ಮೃತಪಟ್ಟ ಘಟನೆ ಬಜಾಲ್ ನಲ್ಲಿ ನಡೆದಿದೆ.

ಬಜಾಲ್ ಕೋರ್ದಬ್ಬು ದೈವಸ್ಥಾನದ ಸಮೀಪದ ನಿವಾಸಿ ಹಿದಾಯತುಲ್ಲ ಎಂಬವರ ಪುತ್ರ ಮೊಹಮ್ಮದ್ ಜೀಶನ್ (6) ಮೃತ ಬಾಲಕ.

ಜೀಶನ್ ಸಂಜೆ ಸೈಕಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಟಿಪ್ಪರ್ ಹಾದು ಮಗುವಿನ ಮೇಲೆಯೇ ಹರಿದಿದೆ. ಈ ಕುರಿತು ಮಂಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!