ಮದರಸ ಪರೀಕ್ಷೆ: ಹೊರೈಝನ್ ಶಾಲೆ ಶೇ 100. ಫಲಿತಾಂಶ
ವಿಟ್ಲ: ಸಮಸ್ತ ಕೇರಳ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಏಳನೇ ಮತ್ತು ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ.
ಐದನೇಯ ತರಗತಿಯ ಝುಹೈಬ್ ರಹಿಮಾನ್, ಏಳನೇಯ ತರಗತಿಯ ಫಾತಿಮತ್ ಸಲ್‌ಮ, ಖದೀಜತ್ ಮಿನ್‌ಹಾ, ಫಾತಿಮತ್ ರಿಫ, ಆಯಿಷತ್ ಮುರ್ಷಿದಾ ಹಾಗೂ ಹತ್ತನೇಯ ತರಗತಿಯ ಹಝ್ರತ್ ಆಲಿಯ, ಫಾತಿಮತ್ ಮುಶ್ರಿಫ ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾಗಿರುತ್ತಾರೆ.





