July 26, 2026

ಪುತ್ತೂರು: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ

0
image_editor_output_image1049157715-1785044005576

ಪುತ್ತೂರು: ಇಲ್ಲಿನ ಅಜೇಯನಗರದ ಮಹಿಳೆಯೊಬ್ಬರ ಮೃತ ದೇಹ ಶಂಭೂರು ಡ್ಯಾಮ್ ಬಳಿ ಜು.24ರ ತಡರಾತ್ರಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಪಡ್ನೂರು ಗ್ರಾಮದ ಅಜೇಯನಗರ ನಿವಾಸಿ ರಾಮ್ ಭಟ್ ಅವರ ಪತ್ನಿ ವಿಜಯ (60ವ.)ಅವರು ಮೃತಪಟ್ಟವರು. ಜು.23ರಂದು ಪೇಟೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅವರು ನಾಪತ್ತೆಯಾಗಿದ್ದರು.ಜು.24ರಂದು ರಾಮ್ ಭಟ್ ಅವರು ಈ ಕುರಿತು ನೀಡಿದ್ದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ರಾತ್ರಿ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಮೃತರು ಪತಿ ರಾಮ ಭಟ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!