ಜಹಾಂಗೀರ್ ಪುರಿಗೆ ತೆರಳಿ ಬುಲ್ಡೋಝರ್ ಮುಂದೆ ನಿಂತ ಕಮ್ಯುನಿಸ್ಟ್ ನಾಯಕಿ: ಸುಪ್ರಿಂಕೋರ್ಟ್ ಆದೇಶ ಉಲ್ಲಂಘನೆಗೆ ಬೃಂದಾ ಕಾರಟ್
ಆಕ್ರೋಶ
ದೆಹಲಿ: ಸಿಪಿಐ(ಎಂ) ಪಕ್ಷದ ನಾಯಕಿ ಬೃಂದಾ ಕಾರಟ್ ಜಹಾಂಗೀರ್ ಪುರಿಗೆ ಭೇಟಿ ನೀಡಿ ಬುಲ್ಡೋಝರ್ ಮುಂದೆ ನಿಂತು ಕಾರ್ಯಚರಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಅಕ್ರಮ ಒತ್ತುವರಿಯನ್ನು ತೆರವಿಗೆ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಬೃಂದಾ ಕಾರಟ್ ಜಹಾಂಗೀರ್ ಪುರಿಗೆ ತೆರಳಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದ್ದಾರೆ.
ಒತ್ತುವರಿ ಕಾರ್ಯಾಚರಣೆಗೆ ಸುಪ್ರೀಂ ತಡೆ ನೀಡಿದೆ. ಈ ಆದೇಶದ ಅನುಷ್ಠಾನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ನಾನು ಜಹಾಂಗೀರ್ ಪುರಿ ಜನರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಮತ್ತು ಸುಪ್ರೀಂ ಕೋರ್ಟ್ ನ ಮುಂದಿನ ಆದೇಶಕ್ಕಾಗಿ ಕಾಯುವಂತೆ ಮನವಿ ಮಾಡುತ್ತೇನೆ. ಧ್ವಂಸ ಮಾಡುವ ಕಾರ್ಯಾಚರಣೆಗಳು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಸುಪ್ರೀಂ ಆದೇಶದ ಪ್ರಕಾರ ಯಾವುದೇ ನೆಲಸಮ ಮಾಡುವಂತಿಲ್ಲ ಎಂದು ಹೇಳಿದ್ದಾರೆ.




