March 24, 2026

ಅಧಿಕಾರ ವಹಿಸಿಕೊಳ್ಳಲು ಕುಟುಂಬ ಸಮೇತ ಹೊರಟಿದ್ದ ಜಿಲ್ಲಾಧಿಕಾರಿಯ ಕಾರು ಅಪಘಾತ

0
image_editor_output_image-193324751-1650352798893.jpg

ಧಾರವಾಡ: ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ವಿಜಯಪುರಕ್ಕೆ ಕುಟುಂಬ ಸಮೇತ ಹೊರಟಿದ್ದ ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿದ್ದ ಕಾರು ಮಂಗಳವಾರ ಬೆಳಿಗ್ಗೆ ಇಲ್ಲಿನ ಯರಿಕೊಪ್ಪ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ.

ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದ ಇವರ ಕಾರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಪವಾಡಸದೃಶ್ಯ ರೀತಿಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ಸಂದರ್ಭದಲ್ಲಿ ಕಾರಿನಲ್ಲಿ ವಿಜಯಮಹಾಂತೇಶ ದಾನಮ್ಮನವರ, ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಅಳಿಯ ಪ್ರವಿಣಕುಮಾರ ಇದ್ದರು. ತಕ್ಷಣ ಇವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರವೀಣ್ ಕುಮಾರ್ ಅವರಿಗೆ ಬೆನ್ನುಹುರಿಗೆ ಪೆಟ್ಟಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರೆಲ್ಲ ಆರೋಗ್ಯವಾಗಿದ್ದರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!