ಹಾಡಹಾಗಲೇ ಮನೆಗೆ ನುಗ್ಗಿ ನಿವೃತ್ತ ಯೋಧನ ಬರ್ಬರವಾಗಿ ಹತ್ಯೆ: ಇಬ್ಬರು ಸಹೋದರರು ಸೇರಿ ಆರು ಮಂದಿಯ ಬಂಧನ
ಬೆಂಗಳೂರು: ಲಕ್ಷ-ಲಕ್ಷ ದರೋಡೆಗೆಂದು ಬಂದವರು ಪುಡಿಗಾಸಿಗಾಗಿ ನಿವೃತ್ತ ಯೋಧನನ್ನು ಕೊಂದು ಇದೀಗ ಜೈಲು ಸೇರಿದ್ದಾರೆ.
ಇತ್ತೀಚೆಗೆ ಹಾಡಹಾಗಲೇ ಮನೆಗೆ ನುಗ್ಗಿ ನಿವೃತ್ತ ಯೋಧರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಸಹೋದರರು ಸೇರಿ ಆರು ಮಂದಿ ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಾರತ್ತಹಳ್ಳಿ ನಿವಾಸಿ ಬಾಬು (29) ಮತ್ತು ಆಂಧ್ರ ಪ್ರದೇಶದ ಕುಪ್ಪಂ ಜಿಲ್ಲೆಯ ಈತನ ಸಹೋದರ ಮುರಳಿ (32) ಹಾಗೂ ಸೋದರ ಸಂಬಂಧಿಗಳಾದ ಗಜೇಂದ್ರ ನಾಯಕ್ (28), ದೇವೇಂದ್ರ (34) ಹಾಗೂ ರಾಜೇಂದ್ರ (34) ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 2 ಕಾರುಗಳು, ಕೃತ್ಯಕ್ಕೆ ಬಳಸಿದ್ದ ಬೀಗ, ಒಂದು ಆ್ಯಪಲ್ ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಏ.13ರಂದು ದೊಮ್ಮಲೂರು ಲೇಔಟ್ ನಿವಾಸಿ ಜ್ಯೂಡ್ ತೆಡ್ಡಾಸ್ ಅಲಿಯಾಸ್ ಸುರೇಶ್(54) ಎಂಬುವರನ್ನು ಕೊಂದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.




