March 20, 2026

ಸಿಡಿಲು‌ ಬಡಿದು ಜಮೀನಿನಲ್ಲಿ ಕೆಲಸ‌ ಮಾಡುತ್ತಿದ್ದ ರೈತ ಸಾವು

0
Screenshot_2022-04-15-04-44-31-05_680d03679600f7af0b4c700c6b270fe7.jpg

ವಿಜಯಪುರ: ಜಿಲ್ಲೆ ವಿವಿಧ ಭಾಗಗಳಲ್ಲಿ ವರುಣಾರ್ಭಟಕ್ಕೆ ಜಿಲ್ಲೆಯಲ್ಲಿ ಓರ್ವ ರೈತ ಬಲಿಯಾಗಿದ್ದು, ಹಾನಿಯ ಅಂದಾಜು ಹೊರ ಬೀಳಬೇಕಿದೆ.

ಗುರುವಾರ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ-ಗಾಳಿಯಾಗಿದೆ.  ಸುರಿದ ಮಳೆ ಸಿಡಿಲಿಗೆ ಬಲಿಯಾದ ರೈತನನ್ನು ವಿಜಯಪುರ ತಾಲೂಕಿನ ಮದಭಾವಿ ಗ್ರಾಮದ ಮರೆಮಸಾಬ್ ಜಾತಗಾರ (45) ಎಂದು ಗುರುತಿಸಲಾಗಿದೆ.

ಮರೆಮಸಾಬ್ ಜಮೀನಿನಲ್ಲಿ ಕೆಲಸ‌ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮೃತನ ಕುಟುಂಬದಲ್ಲಿ ದುಖಃ ಮಡುಗಟ್ಟಿದೆ.

ಸುದ್ದಿ ತಿಳಿದು ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!