ಮುಸ್ಲಿಮ್ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ: ಭಜರಂಗ ಮುನಿ ದಾಸ್ ಬಂಧನ
ಲಖನೌ: ಮುಸ್ಲಿಮ್ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸಿ ಆಶ್ರಮದ ಭಜರಂಗ ಮುನಿ ದಾಸ್ ನನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆ ಹಿಂದೆ ದ್ವೇಷ ಭಾಷಣವನ್ನು ಮಾಡಿದ್ದ ಬಜರಂಗ ಮುನಿ ಸೀತಾಪುರದಲ್ಲಿ ಮುಸ್ಲಿಂ ಮಹಿಳೆಯರಿಗೆ “ಅತ್ಯಾಚಾರ ಬೆದರಿಕೆ” ಹಾಕಿದ್ದರು. ಇದೇ ಪ್ರಕರಣದಲ್ಲಿ ಪೊಲೀಸರು ಮುನಿಯನ್ನು ಸೀತಾಪುರದಲ್ಲಿ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.




